ಅಡಿಲೇಡ್

ದಕ್ಷಿಣ ಆಸ್ಟ್ರೇಲಿಯ ಪ್ರಾಂತದ ರಾಜಧಾನಿಯಾದ ಈ ನಗರ ಟಾರೆನ್ಸ್ ನದೀಮುಖ ಪ್ರದೇಶದಲ್ಲಿದೆ. (ದ. ಅಕ್ಷಾಂಶ  ಪೂ. ರೇಖಾಂಶ ). ಆಸ್ಟ್ರೇಲಿಯದ ನಗರಗಳಲ್ಲಿ 4ನೆಯ ಸ್ಥಾನ ಪಡೆದಿದೆ.  4ನೆಯ ವಿಲಿಯಮ್‍ನ ರಾಣಿಯ ಸ್ಮರಣಾರ್ಥವಾಗಿ ಸ್ಥಾಪಿಸಲ್ಪಟ್ಟಿತು.  ಜನಸಂಖ್ಯೆ 1836ರಲ್ಲಿ ಕೇವಲ 546 ಆಗಿದ್ದು ಈಗ ದ. ಆಸ್ಟ್ರೇಲಿಯದ 60% ಅಂದರೆ 5,77,000ಕ್ಕೆ ಏರಿದೆ.  
	
ಮಳೆಗಾಲದ ಅವಧಿ 122 ದಿನಗಳು. ವಾರ್ಷಿಕ ಮಳೆ ಸರಾಸರಿ  ವಾಯುಗುಣ ಹಿತಕರ.  ಗೋಧಿ ಇಲ್ಲಿನ ಮುಖ್ಯ ಬೆಳೆ.  ಈಗ ದೊಡ್ಡ ಉದ್ದಿಮೆಗಳು ತಲೆ ಎತ್ತಿವೆ.  ಇಲ್ಲಿ ಅಡಿಲೇಡ್ ವಿಶ್ವವಿದ್ಯಾನಿಲಯವಿದೆ (1874).

(ಎನ್.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ